ಮುಗಿಯದ ಒಲವು

ಈ ಸಾಲುಗಳು ಸಂಭಾಷಣೆಯ ರೂಪದಲ್ಲಿ ಇದೆ. ಕೆಂಪು ಬಣ್ಣದ ಸಾಲುಗಳು ಹುಡುಗ ಹೇಳುವುದು ಹಾಗು ಕಪ್ಪು ಬಣ್ಣದ ಸಾಲುಗಳು ಹುಡುಗಿ ಪ್ರತಿಕ್ರಿಯಿಸುವುದು.






ಕರೆಯಲು ನಿನ ಹೆಸರು
ಹಗುರಾಯಿತು ಮನಸು


ಕೇಳಲು ಸವಿಮಾತು
ಒಲವಾಯಿತು ಸೊಗಸು     ||ಪ||


ಪ್ರೀತಿ ನದಿ ತೀರದಿ ನೀನು
ಒಲವ ದೋಣಿ ಕಾದಿಹೆ ಏನು?


ಕನಸಿನ ಕೃಷಿಗೆ ಇನ್ನು
ಚಾಲನೆ ನೀಡಿಹೆ ನೀನು


ನನ್ನೆದೆ ಸಾಗರದಿ
ಪ್ರತೀ ಅಲೆ ನೀನೆ ನೀನು     ||ಅ.ಪ||






ಮುಗಿಯದ ಒಲವಿಗೆ ಅರ್ಜಿ ಹಾಕಿಹೆ
ಪರಿಶೀಲಿಸದೆ ರುಜು ಮಾಡಾಗಿದೆ


ದಿನವಿಡೀ ನೆನೆವ ಕೆಲಸವು ಬೇಕಿದೆ
ಸೇರುವ ಮೊದಲೇ ಸಂಬಳ ನೀಡಿಹೆ


ಹೃದಯದ ದೂರವಾಣಿ ನಿನ್ನ ಕರೆಯಲ್ಲೆ ನಿರತ
ಅಡೆ-ತಡೆ ಅರಿಯೆನು ಮಾತು ಕೇಳಿದೆ ಸತತ      ||೧||


                                                         
                                                         ಕರೆಯಲು ನಿನ ಹೆಸರು. . . .




ಸಲುಗೆಯ ಗಾಳಿಪಟ ತೇಲಿದೆ ಒಂಟಿಯಾಗಿ
ಬೇರೆವುದು ಚಂದಿರನ ಹಾರಿಸೆ ಜಂಟಿಯಾಗಿ


ಭೇಟಿಯ ಮರೆತರೆ ಭಾವನೆಗಳ ಚಳುವಳಿ 
ನೋಡುತ ನಿಂತರೆ ನಿನಗೆ ನಾನೇ ಬಳುವಳಿ


ಕನಸಿನ ಸಂಚಾರದಿ ಕೊಡುವೆಯ ಸೂಚನೆ ???
ಆಗದು !!!
ಮಾಡಿಹೆ ನಿನ್ನ ಕಣ್ಣ ಬೆಳಕಿನ ಪರಿಪಾಲನೆ . . . .     ||೨||




                                                     ಕರೆಯಲು ನಿನ ಹೆಸರು ಹಗುರಾಯಿತು ಮನಸು
                                                     ಕೇಳಲು ಸವಿಮಾತು ಒಲವಾಯಿತು ಸೊಗಸು




                                                                                --- ಸುಮನ

No comments:

Post a Comment