ಮನಸೆಳೆದ ಅಪ್ಸರೆ

ಏನೋ ಹೇಳಬೇಕು ಎಂದು ಎದುರಿಗೆ ಬಂದರೆ
ವಿಷಯ ಮರೆಸಿ ಮನಸೆಳೆದ ಅಪ್ಸರೆ

ಕುಶಲ ವಿಚಾರಿಸಿ ಕೈ ಸನ್ನೆಯಲಿ
ಕುತೂಹಲ ತೋರಿದಳು ಹುಬ್ಬುಗಳ ವಯ್ಯಾರದಲಿ
ಕಾಡುವ ಕವಿತೆ ಹೇಳಿದಳು ಕಣ್ಣಂಚಲಿ
ಮೌನವೇ ಮಾತಾಯಿತು ಸೆಳೆಯುವ ಸಂಚಲಿ

ಆಕ್ರಮಿಸಿ ಪ್ರೀತಿಯ ಕಡಲಿಗೆ ನೂಕಿದಳು
ಈಜು ಬಂದರೂ ಸಾಯುವಂತೆ ಮಾಡಿಹಳು