ಇದ್ದರೆ ಹೀಗಿರಬೇಕು

ಮಣಿಯಿತು ಕಾಮನಬಿಲ್ಲು ಹುಬ್ಬುಗಳ ಆಕಾರಕೆ ,



ದೇವ ದೇವತೆಯರೇ ಬೆರಗಾದರು ವಾಕ್ಚಾತುರ್ಯಕೆ ,

ಇವಳ ಕಮಲ ನಯನ ಕಾಡಿಗೆಗೆ ಮೆರಗು,

ಕೇಶರಾಶಿ ಪುಷ್ಪಗಳಿಗೆ ಸೊಬಗು,

ಬಳುಕುವ ನಡಿಗೆ ಕಡಲ ಅಲೆಗಳಿಗೆ ಹೋಲಿಕೆ

ಹುಡುಗಿ ಇದ್ದರೆ ಹೀಗಿರಬೇಕು ಎನ್ನುವುದು ವಾಡಿಕೆ.

ತಲೆ ಕೆಡಿಸಿಕೊಂಡಿಹರು ಹರೆಯದ ಹುಡುಗರು ವಯ್ಯಾರ ನೋಡಿ,

ನನ್ನ ನೌಕರಿಯೇ ಇದಾಗಿದೆ, ಅಂದ ಚೆಂದವ ಬಣ್ಣಿಸುವುದು ಹೊಗಳಿ ಹಾಡಿ!