ಅರುಂಧತಿ

ತಂಗಾಳಿ ತೇಲಿ ಬರಲು , ಅದರೊಳಿರುವ ತಂಪು ನೀನು.


ಮುಸ್ಸಂಜೆಗೆ ಮುಗಿಲು ನಾಚಲು, ಮೆರಗು ತರುವ ಕೆಂಪು ನೀನು.


ಈ ಅಂದ ನೋಡಲು ಚಂದಿರ ಬರಲು,


ಬೆರಗಾಗಿಸಿ ಮರೆಗೆ ಸರಿಸುವ ಸುಂದರಿ ನೀನು


ಇವನ ದುಸ್ಥಿತಿ ನೋಡಿ ತಾರೆಗಳು ನಗಲು,


ನಗುವಲಿ ಹೊಮ್ಮಿ ಕಣ್ಣು ಕೋರೈಸುವ ಕಾಂತಿ ನೀನು.


ಯಾವ ತಾರೆ ನಗು ಚೆನ್ನ ಎಂಬ ಸವಾಲು ಎದುರಾಗಲು,


ಅರಸಿದಾಗ ಸಿಗುವ ಅರುಂಧತಿಯೇ ನೀನು.