ಧನದಾಹ !!!

ಈಗ ಹರಡುತಿಹುದು ಹೊಸಯುಗದ ಜಡ್ಡು
ಇದಕೆ ಮುಖ್ಯ ಕಾರಣವೇ ದುಡ್ಡು

ಈ ಹಣ ಎಲ್ಲರನ್ನೂ ಆಕರ್ಶಿಸುತದೆ
ತನ್ನತ್ತ ಸೆಳೆದು ವಿನಾಶಕೆ ನೂಕುತದೆ

ದಿನವೂ ನಡೆದಿದೆ 'ಪರಿಸರ ನಾಶ'
ಸಕಲ ಜೀವ ಸಂಕುಲಕೆ ಬಿದ್ದಿದೆ ಪಾಶ

ಜನಿಸಲು ಹಣಹರಿಸಿ ಜನಿಸಬೇಕು
ಸತ್ತು ಮಣ್ಣಾಗಲೂ ದುಡ್ಡೇ ಬೇಕು

ದುಡ್ಡಿದ್ದರೆ ಎಲ್ಲರೂ ದೊಡ್ಡಪ್ಪ
ಇಲ್ಲದಿರೆ 'ಜೀವನ' ಸಾಕಪ್ಪ

ಅತೀ ಹಣದಾಹಕೆ ನಡೆದಿವೆ 'ಸಾವು'
'ಬಡವ-ಬಲ್ಲಿದ'ರಿಗೂ ಪ್ರತೀದಿನ ನೋವು

ಮೋಹ-ಮತ್ಸರ-ಮದ-ಕಾಮಾದಿಗಳು ಗೆಳೆಯರು
ಕ್ಷ್ಯಾಮ-ಕ್ರೋಧ-ವಿನಾಶ ಇದರ ಆಪ್ತರು

'ಮಂತ್ರಿ'ಯ ಹೊಟ್ಟೆಗೆ ಇದುವೇ ಧಾನ್ಯ
ಹಸಿದ ಹೊಟ್ಟೆಗೆ ಆಗದು 'ಅನ್ನ'

ಅನುದಿನ ದುಡಿಯುವ 'ಶ್ರೀಸಾಮಾನ್ಯ'
ಇದಕಾಗಿಯೇ ಆಗಿಹಳು ಸ್ತ್ರೀ-ಸಾಮಾನ್ಯ'

ಬಂಧು-ಬಂಧವರಲಿ ಕಿತ್ತಾಡಬೇಡ
ಒಡಹುಟ್ಟಿದವರನು ಕೊಚ್ಚಾಡಬೇಡ

'ಸಮಾಜ ಸೇವೆ'ಗೆ ತೊಡಗಿಸು ಹಣವ
ಮಸಣದಿ ಹೂಳುವ ಮುನ್ನ ನಿನ್ನ ಹೆಣವ

ಅತೀ ಹಣದಾಹದ ಆಸೆಯ ಸರಿಸು
'ಪ್ರೀತಿ-ಸ್ನೇಹ'ದಿ ಆಸಕ್ತಿ ಬೆಳೆಸು

ಇದು 'ಸಾರ್ವಕಾಲಿಕ ಸತ್ಯ'
ಏಕೆಂದೀ!!! ಇದು ನಡೆದಿದೆ 'ನಿತ್ಯ'

ಹೀಗೆ ಏರಿದರೆ ಹಣದಾಹದ ಕಾವು
'ಪವಿತ್ರದೇಶ' ಕಟ್ಟೇವೇ ನಾವು???

                                                                      --- ಸುಮನ

No comments:

Post a Comment