ಸಮಯವದು ಯಾವುದಾದರೂ ಆಗಲಿ

ಸಮಯವದು ಯಾವುದಾದರೂ  ಆಗಲಿ
ನಯನಕೆ ನಿನ್ನ ಚಿತ್ರವೇ ಕಾಣಲಿ
ನೆನಪಿನ ಹಾವಳಿ,
ಹೇಗೆ ನಾ ತಾಳಲಿ
ಕೊಟ್ಟುಬಿಡು ಪುಟ್ಟ ಜಾಗವನು ಎದೆಯಲಿ......s
ನಿನ ಎದೆಯಲಿ.


ನದಿ ತೀರದಿ, ನಿನ ಕನಸಲಿ
ತಂಗಾಳಿ ತಂದ ತಿಳಿತಂಪಲಿ
ನೆನೆಯುತ ಹೊಸ ಕವಿತೆಯ
ಕುಳಿತಿಹೆ ಯೋಚನೆಯಲಿ
ಹಾಕಲಾಗಿದೆ ಲೇಖನಿಗೀಗ ವ್ಯಾಮೋಹದ ಮಸಿ
ಬರೆಯಲು ಮಿಂಚಿನ ಮಳ್ಳಿ ಹೆಸರನು ತಾಳಲಾರದ ಖುಷಿ


                                             ಸಮಯವದು ಯಾವುದಾದರು ಆಗಲಿ


ಮಮತೆಯ ಸವಿ ಮಳೆಯಲಿ
ಒಲವಿನ ಕಡು ಶಖೆಯಿದೆ
ನೋಟದ ಚಳಿಯಲೂ
ಸೇಳತದ ಸುಖವಿದೆ
ಆಳಕೆ ತಲುಪಿ ಚಿಂತೆಯ ಸಾಗರ ಮರೆತಿಹೆ ಈಜನು ನಾನು
ಪ್ರೀತಿಯ ಕರೆಯಲಿ ಚಾಚುತ ಕರಗಳ ಬದುಕಿಸೋ ಅಲೆಗಳೇ ನೀನು


                                           ಸಮಯವದು ಯಾವುದಾದರು ಆಗಲಿ


                                                                                                       
                                                                                  --- ಸುಮನ

No comments:

Post a Comment