ಕರೆಯಲು ಹೆಸರು

ಈ ಸಾಲುಗಳು ಸಂಭಾಷಣೆಯ ರೂಪದಲ್ಲಿ ಇದೆ. ಕೆಂಪು ಬಣ್ಣದ ಸಾಲುಗಳು ಹುಡುಗ ಹೇಳುವುದು ಹಾಗು ಕಪ್ಪು ಬಣ್ಣದ ಸಾಲುಗಳು ಹುಡುಗಿ ಪ್ರತಿಕ್ರಿಯಿಸುವುದು.





ಕರೆಯಲು ನಿನ ಹೆಸರು
ಹಗುರಾಯಿತು ಮನಸು

ಕೇಳಲು ಸವಿಮಾತು
ಒಲವಾಯಿತು ಸೊಗಸು

ಪ್ರೀತಿ ನದಿ ತೀರದಿ ನೀನು
ಒಲವ ದೋಣಿ ಕಾದಿಹೆ ಏನು?

ಕನಸಿನ ಕೃಷಿಗೆ ಇನ್ನು
ಚಾಲನೆ ನೀಡಿಹೆ ನೀನು

ನನ್ನೆದೆ ಸಾಗರದಿ
ಪ್ರತೀ ಅಲೆ ನೀನೆ ನೀನು





ಮುಗಿಯದ ಒಲವಿಗೆ ಅರ್ಜಿ ಹಾಕಿಹೆ
ಪರಿಶೀಲಿಸದೆ ರುಜು ಮಾಡಾಗಿದೆ

ದಿನವಿಡೀ ನೆನೆವ ಕೆಲಸವು ಬೇಕಿದೆ
ಸೇರುವ ಮೊದಲೇ ಸಂಬಳ ನೀಡಿಹೆ


ಹೃದಯದ ದೂರವಾಣಿ ನಿನ್ನ ಕರೆಯಲ್ಲೆ ನಿರತ
 ಅಡೆ-ತಡೆ ಅರಿಯೆನು ಮಾತು ಕೇಳಿದೆ ಸತತ






                                                               ಕರೆಯಲು ನಿನ ಹೆಸರು. . . .





ಸಲುಗೆಯ ಗಾಳಿಪಟ ತೇಲಿದೆ ಒಂಟಿಯಾಗಿ
ಬೇರೆವುದು ಚಂದಿರನ ಹಾರಿಸೆ ಜಂಟಿಯಾಗಿ


ಭೇಟಿಯ ಮರೆತರೆ ಭಾವನೆಗಳ ಚಳುವಳಿ
ನೋಡುತ ನಿಂತರೆ ನಿನಗೆ ನಾನೇ ಬಳುವಳಿ


ಕನಸಿನ ಸಂಚಾರದಿ ಕೊಡುವೆಯ ಸೂಚನೆ ???
ಆಗದು !!!
ಮಾಡಿಹೆ ನಿನ್ನ ಕಣ್ಣ ಬೆಳಕಿನ ಪರಿಪಾಲನೆ . . . .




                                          ಕರೆಯಲು ನಿನ ಹೆಸರು ಹಗುರಾಯಿತು ಮನಸು
                                           ಕೇಳಲು ಸವಿಮಾತು ಒಲವಾಯಿತು ಸೊಗಸು