ಸವಿ ಸಂಕ್ರಾಂತಿ


       "ಸವಿ ಸಂಕ್ರಾಂತಿ "

ಹಾಡುತ ಹರುಷವ ಸಂಗೀತದೊಳು
ಹರಡುತ ಕಲರವ ಸಂದೇಶದೊಳು
ಅರಸುತ ಅನುಭವ ಸಂಪ್ರೀತಿಯೊಳು
ಹೊಂದುತ ಸಡಗರ ಸಂಕ್ರಾಂತಿಯೊಳು


ಬೆರೆಸಿಹೆ ಎಳ್ಳು-ಬೆಲ್ಲ ಪಂಕ್ತಿ ಪ್ರಾಸದಿ
ಸವಿಯಿರಿ ರಸ-ರುಚಿ ಕವನ ಚಿತ್ತದಿ
ಅಭಿಮಾನವು ಆನಂದ ಆದರದಿ
ಶುಭಾಶಯವು ಪ್ರೀತಿ ಸ್ನೇಹದಿ

                                       -- ಕೃಷ್ಣ ಹುಯಿಲಗೋಳ 

No comments:

Post a Comment